Home
Wel Come to Town Panchayath, Sadalga
ದಿನಾಂಕ 02-04-2012 ರಿಂದ ಸದಲಗಾ ಪಟ್ಟಣ ಪಂಚಾಯತಿಯಲ್ಲಿ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011ನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸದರ ಯೋಜನೆಯ ಉಪಯೋಗ ಪಡೆದುಕೊಳ್ಳಲು ಕೋರಿದೆ.
About Sadalga:
The Town Panchayat Sadalga was constituted in 17-02-1973. It is situated along Chikkodi-Ichalakaranji State Highway,at adistance of 21 Kms from Chikkodi. The town is situated at the Karnataka border. The Doodh ganga River flows to the northern side of the town; the river water forms a useful resource to grow a good harvest to the farmers. The town Major connectivity by road from the district head quarters Belgaum is 93 kms. The town is situated amidst hills. The TP has 20 wards and equal number of councilors and 3 numbers of Nominee Councilors.
Computerisation: Properties within Sadalga T.P limits have been identified & details have been collected & Computerisation of records is under progress. Citizens can avail this facility to pay property tax shortly. Birth & Death records are available online from the year 1999. Citizens can make use of this facility to register & obtain Birth & Death Certificates.
ಸದಲಗಾ ಪಟ್ಟಣದ ಬಗ್ಗೆ ಕಿರು ಟಿಪ್ಪಣಿ:
ಬೆಳಗಾವಿ ಜಿಲ್ಲೇಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣವು ಕರ್ನಾಟಕದ ಗಡಿ ಭಾಗವಾಗಿದ್ದು ಅನೇಕ ಪುರಾತನ ಇತಿಹಾಸವನ್ನು ಹೋರತುಪಡಿಸಿ ಎಲೆಯ ಮರೆಯ ಕಾಯಿಯಂತೆ ಮರೆಯಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣವನ್ನು ಶಂಕರಪುರವೆಂದು ಕರೆಯುತ್ತಿದ್ದು, ಇಲ್ಲಿ ಹರಿಯುವ ದೂಧಗಂಗಾ ನದಿಯ ತಟದಲ್ಲಿ 108 ಲಿಂಗಗಳಿದ್ದು ಸದಾ ವೇದಘೋಷ ಕೇಳಿ ಬರುತ್ತಿತ್ತು. ಎಂಬುದು ಇತಿಹಾಸದ ದಾಖಲೆಗಳು ಹೇಳುತ್ತವೆ. ಕ್ರಿ.ಶ. 1228 ನೇ ಇಸ್ವಿಯಲ್ಲಿ ವಿಜಾಪುರದ ಆದಿಲಶಾಹಿ ಬಾದಶಾಹನು ಲಗಮಗೌಡಾ ಎಂಬ ಶೂರ ಸೇನಾಪತಿಗೆ ಅವನ ಸಾಹಸಕ್ಕೆ ಮೆಚ್ಚಿ ಸದ್ದಲಗಿ ಸುತ್ತಮುತ್ತಲಿನ ಸುಮಾರು 21 ಗ್ರಾಮಗಳನ್ನು ಉಂಬಳಿ ಹಾಕಿಕೊಟ್ಟು ಸರ ದೇಸಾಯಿ ಮತ್ತು ನಾಡಗೌಡರ ಪದವಿಗಳನ್ನು ಕೊಟ್ಟು ಸದಲಗಾವನ್ನು ಕೇಂದ್ರವನ್ನು ಮಾಡಿದ್ದು ಕಂಡು ಬರುತ್ತದೆ. ಸದಲಗಾ ಹೋಬಳಿ ವ್ಯಾಪ್ತಿಯಲ್ಲಿ 25 ಗ್ರಾಮ ಪಂಚಾಯತಿಗಳು, 6 ಜಿಲ್ಲಾ ಪಂಚಾಯತಿ ಸದಸ್ಯರು, 20 ತಾಲೂಕಾ ಪಂಚಾಯತಿ ಸದಸ್ಯರು ಇರುತ್ತಾರೆ. ಮತ್ತು ಒಂದು ಪಟ್ಟಣ ಪಂಚಾಯತ ಕಾರ್ಯಾಲಯವು ಇರುತ್ತದೆ. ಪ್ರತಿ ನಿತ್ಯದ ವ್ಯವಹಾರಕ್ಕಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ನೌಕರರು ಅಪಾರ ಸಂಖ್ಯೆಯಲ್ಲಿ ಬಂದು ವ್ಯಾಪಾರ ನೌಕರಿ ಹಾಗೂ ಶಿಕ್ಷಣ ಪಡೆಯುತ್ತಿದ್ದಾರೆ.
ಸದಲಗಾದಲ್ಲಿ ಹಳೆಯ ಪುರಾತನ ಕಾಲದ ಮಹಾದೇವ ಮಂದಿರ, ಹನುಮಾನ ಮಂದಿರ, ದತ್ತ ಮಂದಿರ, ಬಣಶಂಕರಿ ಗುಡಿ, ಸಿದ್ದೇಶ್ವರ ಗುಡಿ ಮತ್ತು ಶಮನಾ ಪೀರ ದರ್ಗಾ ಇರುತ್ತದೆ. ಹಾಗೂ ಸದಲಗಾದಲ್ಲಿ ನಾಲ್ಕು ಜೈನ ಬಸದಿಗಳು ಇರುತ್ತದೆ. ಅಲ್ಲದೆ ಈ ಗ್ರಾಮದ ವಿದ್ಯಾಸಾಗರ ಜೈನ ಮುನಿಗಳು ಪ್ರಸಿದ್ದಿಯಾಗಿರುತ್ತಾರೆ. ಮತ್ತು ಸಾವಿರಾರು ಜನರು ಸದಲಗಾ ಪಟ್ಟಣಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಸದಲಗಾದಲ್ಲಿ ಸುಮಾರ 20ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುತ್ತದೆ. ಈ ಗ್ರಾಮವು ಒಳ್ಳೆಯ ಪರಿಸರ ಹೊಂದಿದ್ದು ಜನರಿಗೆ ಒಳ್ಳೆಯ ಅನುಕೂಲ ಪಟ್ಟಣವು ಇರುತ್ತದೆ.
ಗಣಕೀಕರಣ: ಸದಲಗಾ ಪಟ್ಟಣ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸು ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ. ಇದರ ಜೊತೆಗೆ 1999 ನೇ ಸಾಲಿನಿಂದ ಈವರೆಗೆ ಜನನ ಮತ್ತು ಮರಣ ದಾಖಲೇಗಳನ್ನು ಗಣಕೀಕೃತಗೊಳಿಸಿದ್ದು,ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ.
HelpLine For Citizen Service Contact:(08338-251731)
ಮತದಾರರ ದಿನಾಚರಣೆಯ ಕುರಿತು ಅರಿವು ಮೂಡಿಸಲು ಪ್ರತಿಜ್ಞಾ ವಿಧಿಯನ್ನು ಕಚೇರಿಯಲ್ಲಿ ದಿನಾಂಕ 25/01/2012 ರಂದು 11.00 ಘಂಟೆಗೆ ಬೋಧಿಸಿದರು. ಪಟ್ಟಣ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯಾಧಿಕಾರಿಗಳು ಮತ್ತು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯಾತಿ ಗಣ್ಯ ವ್ಯಕ್ತಿಗಳ ಹಾಜರಾತಿಯಲ್ಲಿ ಸುಭದ್ರ ರಾಷ್ಟ್ರಕ್ಕೆ ಯೋಗ್ಯವಾದ ವ್ಯಕ್ತಿಗೆ ಮತ ನೀಡಿ ಅಂತಾ ಪ್ರತಿಜ್ಞೆ ಮಾಡಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು.

ಪಟ್ಟಣ ಪಂಚಾಯತ ಸದಲಗಾ ವ್ಯಾಪ್ತಿಯಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ
ದಿ:17-11-2011ರಂದು ಸದಲಗಾ ಪಟ್ಟಣದಲ್ಲಿ ಸಾಮಾಜಿಕ ಆರ್ಥಿಕ & ಜಾತಿ ಗಣತಿ ಕಾರ್ಯ ಪ್ರಾರಂಭವಾಗಿರುತ್ತದೆ. ಸಾರ್ವಜನಿಕ ತಮ್ಮ ಸರಿಯಾದ ಮಾಹಿತಿಯನ್ನು ಗಣತಿದಾರರಿಗೆ ನೀಡಿ ಸಹಕರಿಸಬೇಕು.
ಆಧಾರ ಯೋಜನೆ:- ಪಟ್ಟಣ ಪಂಚಾಯತ ಸದಲಗಾ ವ್ಯಾಪ್ತಿಯಲ್ಲಿ ದಿನಾಂಕ: 16.10.2011 ರಿಂದ "ಆಧಾರ ಗುರುತಿನ ಚೀಟಿ"ನೋಂದಣಿ ಕಾರ್ಯ ಪ್ರಾರಂಭವಾಗಿದ್ದು,ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿರಿ..
ಪಟ್ಟಣ ಪಂಚಾಯತ ಕಾರ್ಯಾಲಯ ಮುಂದೆ ಹಾಗೂ ಪಟ್ಟಣದ ಹಳೆಯ ಬಸ್ಸಸ್ಟಾಂಡ್ ರಂಗ ಮಂದಿರದ ಹತ್ತಿರ ಧ್ವಜಾರೋಹಣವನ್ನು ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿ/ನಿಯರ ಹಾಗೂ ಸಾರ್ವಜನಿಕರು ಮತ್ತು ಪಟ್ಟಣ ಪಂಚಾಯತ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಶಾಲಾ ಕಾಲೇಜ್ ಶಿಕ್ಷಕರು, ಆರೇಕ್ಷಕ ಹಾಗೂ ಅಗ್ನೀ ಶಾಮಕದಳ ಸಿಬ್ಬಂದಿ ಕೂಡಿಕೊಂಡು 63ನೇ ಗಣರಾಜ್ಯೋತ್ಸವ ದಿನವನ್ನು ವಿಜೃಂಭನೆಯಿಂದ ಆಚರಿಸಲಾಯಿತು.
![]() |
This Page is maintained by Shri. S.K. Malakapure (KMAS) Chief Officer Town Panchayat Sadalga.


